Sri Venkataramana Temple Kallianpur

Loading Events

« All Events

  • This event has passed.

ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮ

January 15 January 17

ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ।।

ಸಮಾಜ ಬಾಂಧವರೇ,

ನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮಗಳನ್ನು ಇದೇ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದಲ್ಲಿ ಬರುವ ತಾ || 15-01-2024 ರಿಂದ 17-01-2024 ರ ತನಕ ಹಮ್ಮಿಕೊಂಡಿರುತೇವೆ.

ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿವೆ;

ತಾ || 15-01-2024 ರ ಸೋಮವಾರ
ಬೆಳಿಗ್ಗೆ 8.30 ಕ್ಕೆ ಪ್ರಾರ್ಥನೆ, ಗಣಪತಿ ಪೂಜೆ, ಋತ್ವಿಜಾವರಣೆ ಜಪಾನುಷ್ಠಾನ ಪ್ರಾರಂಭ.

ತಾ || 16-01-2024 ರ ಮಂಗಳವಾರ
ಬೆಳಿಗ್ಗೆ 8.00 ಕ್ಕೆ ಪ್ರಾರ್ಥನೆ, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಏಕೋತ್ತರ ಶತಕಲಶಾಭಿಷೇಕ, ಪವಮಾನ ಅಭಿಷೇಕ, ಗಂಗಾಭಿಷೇಕ, ಸಾನಿಧ್ಯಹವನ, ಮಹಾಪೂಜೆ.
ಸಾಯಂಕಾಲ 5.00 ಕ್ಕೆ ಬಾಲಾಲಯದಲ್ಲಿ ಸನವಗ್ರಹ ವಾಸ್ತು ರಾಕ್ಷೋಘ್ನ ಹವನ, ಬಲಿಪ್ರಧಾನ, ಪೂರ್ಣಾಹುತಿ, ಮಂಗಳಾರತಿ.
ರಾತ್ರಿ 7.00 ಕ್ಕೆ ವಿಶೇಷ ಹೂವಿನ ಪೂಜೆ, ಮಹಾಪ್ರಾರ್ಥನೆ, ಕಲಾಸಂಕೋಚ ವಿಧಿಗಳು ಪ್ರಾರಂಭ.

ತಾ || 17-01-2024 ರ ಬುಧವಾರ
ಬೆಳಿಗ್ಗೆ 8.00 ರಿಂದ ನೂತನ ಬಾಲಾಲಯದಲ್ಲಿ ಪ್ರತಿಷ್ಠ ವಿಧಿ ವಿಧಾನ ಆರಂಭ, ಆಂದು ಬೆಳಿಗ್ಗೆ 10.26 ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಸಪರಿವಾರ ಶ್ರೀ ವೆಂಕಟರಮಣ ದೇವರ ಪ್ರತಿಷ್ಠೆ, ದ್ವಾದಶ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಹಾಸಮರಾಧನೆ.

ಈ ಪುಣ್ಯಪ್ರದ ಕಾರ್ಯಗಳಲ್ಲಿ ಸಮಾಜ ಬಾಂಧವೆಲ್ಲರೂ ಕುಟುಂಬ ಸಮೇತರಾಗಿ ಪಾಲ್ಗೊಂಡು, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಹರಿ ಓಂ

ಧನ್ಯವಾದಗಳು ????

ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ

Sri Venkataramana Temple Kallianpur