Sri Venkataramana Temple Kallianpur

ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಸ್ವಾಗತ ಕೋರಿಕೆ ಹಾಗೂ ಭವ್ಯ ಮೆರವಣಿಗೆ ಕಾರ್ಯಕ್ರಮ

ಪ್ರಿಯ ಭಗವತ್ ಭಕ್ತ ಬಾಂಧವರೇ ತಮಗೆ ಈ ಮೊದಲೇ ತಿಳಿದಿರುವಂತೆ ನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಶಿಲಾ ಕೆತ್ತನೆಯ ಕಾರ್ಯವು ಈಗಾಗಲೇ ಆರಂಭವಾಗಿದ್ದು ಅಂದಾಜು 65 ಪ್ರತಿಶತ ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಲು ತುಂಬಾ ಸಂತೋಷಪಡುತ್ತೇವೆ. ಇದೆ ಬರುವ ತಾರೀಕು 08/11/2023 ನೇ ಬುಧವಾರದಂದು ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಹೊತ್ತ ಮೊದಲನೆಯ ಟ್ರಕ್ ಶ್ರೀ ದೇವಳಕ್ಕೆ ಆಗಮಿಸಲಿದೆ. ಈ ಶಿಲಾ ಕೆತ್ತನೆಯ ಸಾಮಗ್ರಿಯನ್ನು ಹೊತ್ತ ವಾಹನವನ್ನು ಸಂತೆಕಟ್ಟೆಯ ಶ್ರೀ ವೀರಭದ್ರ […]

ವಿಶ್ವರೂಪ ದರ್ಶನ

ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ಸಮಾಜ ಬಾಂಧವರೇ, ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ, ಕಾರ್ತಿಕ ಮಾಸದ ಶುದ್ಧ ಷಷ್ಠೀ ತಾ || 19-11-2023 ನೇ ಆದಿತ್ಯವಾರ ಪ್ರಾತಃಕಾಲ 5:00 ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ವರ್ಷಂಪ್ರತಿ ಜರಗುವ ವಿಶ್ವರೂಪ ದರ್ಶನವು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಈ ಸೇವೆಯು ದೇವಸ್ಥಾನದ ಆವರಣದಲ್ಲಿ ಜ್ಯೋತಿ ಬೆಳಗಿಸಿ ಬಹಳ ವಿಜೃಂಭಣೆಯಿಂದ ಭಜಕವೃಂದದವರ ಸಹಕಾರದೊಂದಿಗೆ ಜರಗಲಿರುವುದು. ಸಮಾಜ ಬಾಂಧವರೆಲ್ಲರು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ದೇವತಾ ವಿನಿಯೋಗ […]

ಚಾತುರ್ಮಾಸ ಸಮಾಪ್ತಿ

ಸಮಾಜ ಬಾಂಧವರೇ, ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ, ಕಾರ್ತಿಕ ಮಾಸದ ಶುದ್ಧ ದಶಮಿ ತಾ | 22-11-2023 ನೇ ಬುಧವಾರ ಶ್ರೀ ದೇವರ ಚಾತುರ್ಮಾಸ ಸಮಾಪ್ತಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಈ ಕೆಳಗಿನ ದೇವತಾ ಕಾರ್ಯಗಳು ನಡೆಯಲಿವೆ. ಕಾರ್ಯಕ್ರಮಗಳ ವಿವರ ಬೆಳಗ್ಗೆ08.30 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ, ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಸಂಪ್ರೋಕ್ಷಣೆ, ದ್ವಾದಶಕಲಶಾಭಿಷೇಕ, ಸಾನಿಧ್ಯ ಹವನ. ಮದ್ಯಾಹ್ನ 12.30 ಕ್ಕೆ ಮಹಾಪೂಜೆ ಹಾಗೂ 1.00 ಗಂಟೆಗೆ ಬ್ರಾಹ್ಮಣ ಸಂತರ್ಪಣೆ ಜರುಗಲಿರುವುದು. ಸೇವಾದಾರರು […]

95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವ

ಸಮಾಚರಣ ಸರೋಜಂ ಸಾಂದ್ರ ನೀಲಾಂಬು ಧಾಭಂ |ಜಘನ ನಿಹಿತ ಪಾಣಿಂ ಮಂಡನಂ ಮಂಡನಾನಾಂ ||ತರುಣ ತುಳಸಿ ಮಾಲಾ ಕಂಧರಂ ಕಾಂಜನೇತ್ರಂ |ಸಾಧಯ ಧವಳ ಹಾಸಂ ವಿಟ್ಟಲಂ ಚಿಂತಯಾಮಿ || ಸಮಾಜ ಬಾಂಧವರೇ, ನಮ್ಮ ಶ್ರೀ ದೇವಸ್ಥಾನದಲ್ಲಿ 95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವವು ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 17-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಗೆ ಆರಂಭಗೊಂಡು ಮಾರ್ಗಶಿರ ಶುದ್ಧ ದ್ವಾದಶಿ 24-12-2023 ನೇ ಆದಿತ್ಯವಾರ ಪ್ರಾತಃಕಾಲ […]

ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮ

ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ।। ಸಮಾಜ ಬಾಂಧವರೇ, ನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಸಪರಿವಾರ ಶ್ರೀ ವೆಂಕಟರಮಣ ದೇವರನ್ನು ನೂತನ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮಗಳನ್ನು ಇದೇ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದಲ್ಲಿ ಬರುವ ತಾ || 15-01-2024 ರಿಂದ 17-01-2024 ರ ತನಕ ಹಮ್ಮಿಕೊಂಡಿರುತೇವೆ. ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿವೆ; ತಾ || 15-01-2024 ರ ಸೋಮವಾರಬೆಳಿಗ್ಗೆ 8.30 ಕ್ಕೆ ಪ್ರಾರ್ಥನೆ, ಗಣಪತಿ ಪೂಜೆ, ಋತ್ವಿಜಾವರಣೆ ಜಪಾನುಷ್ಠಾನ ಪ್ರಾರಂಭ. ತಾ […]

Punar Pratishta 2025

|| Kalyana Adbhuta Gatraya Kaamitartha PradayineSrimad Venkatanathaya Srinivasaya Te Namaha || Dear Samaj Bhandavas, With the divine blessings of Hariguru, we are delighted to announce that the Punar Pratishta of Saparivara Lord Venkataramana & inauguration / grand opening ceremony of our newly constructed Kalamandir Hall by the divine presence of Sri Kashi Matadipathi Srimad Samyamindra […]

Sri Venkataramana Temple Kallianpur