Sri Venkataramana Temple Kallianpur

ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಸ್ವಾಗತ ಕೋರಿಕೆ ಹಾಗೂ ಭವ್ಯ ಮೆರವಣಿಗೆ ಕಾರ್ಯಕ್ರಮ

ಪ್ರಿಯ ಭಗವತ್ ಭಕ್ತ ಬಾಂಧವರೇ ತಮಗೆ ಈ ಮೊದಲೇ ತಿಳಿದಿರುವಂತೆ ನಮ್ಮ ಶ್ರೀ ದೇವಳದ ಜೀರ್ಣೋದ್ಧಾರದ ಶಿಲಾ ಕೆತ್ತನೆಯ ಕಾರ್ಯವು ಈಗಾಗಲೇ ಆರಂಭವಾಗಿದ್ದು ಅಂದಾಜು 65 ಪ್ರತಿಶತ ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಲು ತುಂಬಾ ಸಂತೋಷಪಡುತ್ತೇವೆ. ಇದೆ ಬರುವ ತಾರೀಕು 08/11/2023 ನೇ ಬುಧವಾರದಂದು ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಹೊತ್ತ ಮೊದಲನೆಯ ಟ್ರಕ್ ಶ್ರೀ ದೇವಳಕ್ಕೆ ಆಗಮಿಸಲಿದೆ. ಈ ಶಿಲಾ ಕೆತ್ತನೆಯ ಸಾಮಗ್ರಿಯನ್ನು ಹೊತ್ತ ವಾಹನವನ್ನು ಸಂತೆಕಟ್ಟೆಯ ಶ್ರೀ ವೀರಭದ್ರ […]

ವಿಶ್ವರೂಪ ದರ್ಶನ

ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯತೇ ನಮಃ ಸಮಾಜ ಬಾಂಧವರೇ, ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ, ಕಾರ್ತಿಕ ಮಾಸದ ಶುದ್ಧ ಷಷ್ಠೀ ತಾ || 19-11-2023 ನೇ ಆದಿತ್ಯವಾರ ಪ್ರಾತಃಕಾಲ 5:00 ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ವರ್ಷಂಪ್ರತಿ ಜರಗುವ ವಿಶ್ವರೂಪ ದರ್ಶನವು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಈ ಸೇವೆಯು ದೇವಸ್ಥಾನದ ಆವರಣದಲ್ಲಿ ಜ್ಯೋತಿ ಬೆಳಗಿಸಿ ಬಹಳ ವಿಜೃಂಭಣೆಯಿಂದ ಭಜಕವೃಂದದವರ ಸಹಕಾರದೊಂದಿಗೆ ಜರಗಲಿರುವುದು. ಸಮಾಜ ಬಾಂಧವರೆಲ್ಲರು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ದೇವತಾ ವಿನಿಯೋಗ […]

Sri Venkataramana Temple Kallianpur